ನಿಮ್ಮ ಮನೆ ಮಗ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ನಿಮ್ಮ ಆರ್ಶೀವಾದದಿಂದ ಶಾಸಕನಾಗಿ ನನ್ನ ಚಿಕ್ಕಬಳ್ಳಾಪುರ ಜನರ ಸೇವೆ ಮಾಡುವ ಸದಾವಕಾಶ ನನ್ನದಾಗಿದೆ. ನಿಮ್ಮ ನಂಬಿಕೆ, ಭರವಸೆ, ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ.
ಒಬ್ಬ ದಕ್ಷ ಆಡಳಿತಗಾರನಾಗಿ, ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದು ಮೂಲಭೂತ ಸೌಕರ್ಯ, ಉತ್ತಮ ಶಿಕ್ಷಣ, ಆರೋಗ್ಯ ಹಾಗೂ ಯುವಕರಿಗೆ ಉದ್ಯೋಗ ಒದಗಿಸುವುದು ನನ್ನ ಪ್ರಮುಖ ಧ್ಯೇಯ.
ನನ್ನ ಚಿಕ್ಕಬಳ್ಳಾಪುರದ ಬಗ್ಗೆ ನನ್ನದೇ ಆದ ಹಲವಾರು ಕನಸುಗಳಿವೆ.